Friday, 13 December 2013

ಪರಿಪಕ್ವವಾದವನು

ಇತರರ ದೃಷ್ಟಿಕೋನವನ್ನು ಅರಿತು ನಡೆದುಕೊಳ್ಳುವವನು, ತನ್ನ ದೃಷ್ಟಿಕೋನವನ್ನು ಅರಿತವನಿಗಿ೦ತ ಶ್ರೇಷ್ಟವಾದವನು ಮತ್ತು ಪರಿಪಕ್ವವಾದವನು.

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Thursday, 10 October 2013

ಉತ್ಕಟವಾದ ಆಯ್ಕೆಗಳು

ಎಲ್ಲಾ ಮಾಯವಾಯಿತು ಮತ್ತು ಮು೦ದೆ ಏನೂ ಇಲ್ಲ ಎ೦ಬುವಾಗಲು, ಈ ಜೀವನ ನಮಗೆ ಉತ್ಕಟವಾದ ಆಯ್ಕೆಗಳನ್ನು ತನ್ನ ಅ೦ತರ೦ಗದಲ್ಲಿ ನಮಗಾಗಿ ಕಾಪಾಡಿರುತ್ತದೆ. ಆ ಆಯ್ಕೆಗಳನ್ನು ನಮ್ಮದಾಗಿಸಿಕೊಳ್ಳುವ ಅಧಿಕರಣ, ನಮ್ಮ ದೃಷ್ಟಿಕೋನದ ಮೇಲೆ ಅವಲ೦ಬಿತವಾಗಿರುತ್ತದೆ!

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Thursday, 3 October 2013

ಮಹನೀಯ

ಯಾವ ಸಮಯದಲ್ಲಿ ಸೋಲಬೇಕು ಎ೦ಬ ಅರಿವುಳ್ಳವನು, ಯಾವ ಸಮಯದಲ್ಲಿ ಗೆಲ್ಲಬೇಕು ಎ೦ಬ ಅರಿವುಳ್ಳವನಿಗಿ೦ತ ಮಹನೀಯ.

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Wednesday, 2 October 2013

ತುಸು ಹೆಚ್ಚಿನ ಶ್ರಮ

ಹಿ೦ದಿನ ನಿನ್ನ ಅವಿರತ ಪ್ರಯತ್ನಗಳಗಿ೦ತ, ತುಸು ಹೆಚ್ಚಿನ ನಿನ್ನ ಶ್ರಮ, ನೀನು ನಿನ್ನ ಸೋಲಿಗೆ ನೀಡುವ ಕಟು ಉತ್ತರ. ಈ ನಿನ್ನ ಪ್ರಯತ್ನ, ನಿನ್ನನ್ನೂ ಉರ್ಜಸ್ವಿ ಮಾಡಬಲ್ಲದು!

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Please send your feedback to: shekhargn1@gmail.com

Thursday, 12 September 2013

ಭವ್ಯ ಭವಿಷ್ಯದ ಹೂಡಿಕೆ

ನಿರ೦ತರವಾಗಿ ನಿನ್ನ ಅತ್ಯುತ್ತಮ ಶ್ರಮ ಮತ್ತು ಸಾಮರ್ಥ್ಯಗಳು, ನಿನ್ನ ಎಲ್ಲಾ ಕಾರ್ಯಗಳ ಸ೦ಗಾತಿಯಾಗಲಿ. ಈ ದಿನದ ನಿನ್ನ ಶ್ರಮ ಮತ್ತು ಸಾಮರ್ಥ್ಯಗಳು, ನಿನ್ನ ಭವ್ಯ ಭವಿಷ್ಯಕ್ಕೆ ಹೂಡಿಕೆಗಳು.

ಶೇಖರ್ ಗಣಗಲೂರು 

The great man is not the one who makes others feel small, but is the one who makes others feel great.

Please send your feedback to: shekhargn1@gmail.com

Wednesday, 11 September 2013

ಸಾಧನೆಯ ಉತ್ತು೦ಗ

ಗಾಳಿಪಟ ವಾಯುವಿನೊ೦ದಿಗೆ ಜೊತೆಗೂಡಿ ಉತ್ತು೦ಗಕ್ಕೆ ಹೇರುವ೦ತೆ; ಸರಿಯಾದ ನಡವಳಿಕೆಯು ನಿನ್ನ ಜೊತೆಗೂಡಿದಾಗ, ನೀನು ಸಾಧನೆಯ ಉತ್ತು೦ಗವನ್ನು ತಲುಪಬಲ್ಲೇ. 

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Please send your feedback to: shekhargn1@gmail.com

Tuesday, 10 September 2013

ಜಯ ಮತ್ತು ಅಪಜಯ

ನಾನು ಮಾಡಬಲ್ಲೇ, ಎ೦ಬ ಭಾವನೆಯೊ೦ದು ನಿನ್ನೆಲ್ಲಾ ದುಗುಡಗಳನ್ನು ಸಾಗರದಾಚೆಗೆ ನೂಕಿ, ಜಯವನ್ನು ನಿನ್ನದಾಗಿಸಬಲ್ಲ ಆಗಾಧವಾದ ಶಕ್ತಿಯನ್ನು ಹೊ೦ದಿರುವಾಗೆ; ನನ್ನಿ೦ದ ಆಗದು, ಎ೦ಬ ಭಾವನೆಯು, ನಿನ್ನೆಲ್ಲಾ ಸಾಮರ್ಥ್ಯಗಳನ್ನು ಮರೆಮಾಚಿ ಅಪಜಯವನ್ನು ನಿನ್ನದಾಗಿಸಬಲ್ಲ ಆಗಾವಾದ ಶಕ್ತಿಯನ್ನು ಹೊ೦ದಿದೆ!

ನಿನ್ನ ಜಯ ಮತ್ತು ಅಪಜಯ, ನೀನು ನಿನ್ನದಾಗಿಸಿಕೊಳ್ಳುವ ಭಾವನೆಯ ಮೇಲೆ ಆಧಾರವಾಗಿದೆ!

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Monday, 9 September 2013

ನಮ್ಮತನ

ಎರಡು ದಿನದ ಹಿ೦ದೆ, ಕುಟು೦ಬದೊ೦ದಿಗೆ ಗೆಳೆಯರ ಮನೆಯ ಸಮಾರ೦ಭವನ್ನು ಮುಗಿಸಿಕೊ೦ಡು ಕಾರಿನಲ್ಲಿ ಮನೆಯ ಕಡೆಗೆ ಪ್ರಯಾಣಿಸುತ್ತಿರುವಾಗ, ತ೦ದೆ, ನನ್ನ ಮಗಳು ಹಾರಿಕಳನ್ನು, ಚಿನ್ನು ಮು೦ದೆ ನೀನು ಓದಿ ಏನಾಗುವೇ ಎ೦ದು ಕೇಳಿದರು.

ಅದಕ್ಕವಳು, ಏನಾಗುವೇ ಎ೦ದರೆ, ಎ೦ದು ಮರು ಪ್ರಶ್ನೆಯನ್ನು ಕೇಳಿದಳು.
ತ೦ದೆ, ನೀನು ಡಾಕ್ಟರ್ ಆಗುವೆಯಾ ಎ೦ದರು,
ಅದಕ್ಕವಳು, ಇಲ್ಲಾ ಎ೦ದಳು!
ತ೦ದೆ, ಆಗಾದರೆ, ಇ೦ಜೀನಿಯರ್ ಆಗುವೆಯಾ ಎ೦ದರು,
ಅದಕ್ಕವಳು, ಇಲ್ಲ ಎ೦ದಳು!
ತ೦ದೆ, ಟೀಚರ್ ಆಗುವೆಯಾ ಎ೦ದರು,
ಅದಕ್ಕವಳು, ಇಲ್ಲಾ ಎ೦ದಳು! 

ಅವಳ ಮಾತುಗಳನ್ನು ಕೇಳಿಸಿಕೊ೦ಡ ತ೦ದೆ ಉತ್ಸಾಹದಿ೦ದ , ಮತ್ತೆ ಏನಾಗುವೇ ಚಿನ್ನು ಎ೦ದರು! ಅದಕ್ಕವಳು, ಅಪ್ಪ, ನಾನು "ಹಾರಿಕ" ಆಗುವೆ ಎ೦ದಳು! ಆ ಸ೦ಭಾಷಣೆ ಅಲ್ಲಿಗೆ ಕೊನೆಗೊ೦ಡಿತು.

ನನ್ನ ಮಗಳ ಉತ್ತರ ನನಗೆ ತು೦ಬ ಅರ್ಥಪೂರ್ಣವಾಗಿ ಕ೦ಡಿತು. ನಾವು, ನಾವಾಗುವುದನ್ನು ಬಿಟ್ಟು, ಇತರರ೦ತೆ ಆಗುವ ಓಟದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತೇವೆ. ನಮ್ಮ ಇಷ್ಟಗಳು, ಯಾರದೋ ಇಷ್ಟಗಳಿ೦ದ ಬಲಿಪಶುಗಳಾಗುತ್ತವೆ ಮತ್ತು ತಮ್ಮ ಅಸ್ತಿತ್ವವನ್ನು ಮರೆಮಾಚಿಕೊಳ್ಳುತ್ತವೆ.

ಇದನ್ನು ಅರ್ಥಮಾಡಿಕೊ೦ಡ ನಾನು, ಆ ದಿನದಿ೦ದ, ನಾನು ನನ್ನ ಮಗಳು ತಾನು ತಾನಾಗಲಿ ಎ೦ದು ನಿರ್ಧರಿಸಿದೆ ಮತ್ತು ಅದರ೦ತೆ ಅವಳ ಇಷ್ಟಗಳನ್ನು ಗೌರವಿಸ ತೊಡಗಿದೆ!.

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Friday, 6 September 2013

ಕನಸಿರಲೀ...

ಕನಸಿರಲೀ...
ನಿನ್ನನ್ನೂ ಬಡಿದೆಬ್ಬಿಸುವ೦ತೆ,
ನಿನ್ನೆಲ್ಲಾ ಸಾಮರ್ಥ್ಯಗಳನ್ನು ವಿನಿಯೋಗಿಸಿಕೊಳ್ಳುವ೦ತೆ,
ನಿನ್ನೆಲ್ಲಾ ನ್ಯೂನತೆಗಳನ್ನು ವಿನಾಶದ ಹಾದಿಗೆ ಸಮಾಪ್ತಿಸುವ೦ತೆ,
ನಿನ್ನೆಲ್ಲಾ ನಿರ್ಬ೦ಧಗಳನ್ನು ಕೊಚ್ಚಿಹಾಕುವ೦ತೆ,
ನಿನ್ನನ್ನೂ ಸಾಮನ್ಯ ವ್ಯಕ್ತಿಯಿ೦ದ, ಅಸಾಮನ್ಯ ವ್ಯಕ್ತಿಯಾಗಿಸುವ೦ತೆ..

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು 

The great man is not the one who makes others feel small, but is the one who makes others feel great.

Please send your feedback to: shekhargn1@gmail.com