Friday 30 August 2013

ಹೆಚ್ಚಿನದ್ದು ನಿನಗೆ ಏನೂ ಬೇಕು!

ಹೆಚ್ಚಿನದ್ದು ನಿನಗೆ ಏನೂ ಬೇಕು!
ಎಲ್ಲವೂ, ನಿನ್ನಲ್ಲಿಯೇ ವಸ್ತುಸ್ಥಿತಿಯಾಗಿವೆ,
ದುಃಖ ಬೇಕೆ೦ದರೇ, ದುಃಖ,

ಸುಖ ಬೇಕೆ೦ದರೇ, ಸುಖ,
ಸೋಲು
ಬೇಕೆ೦ದರೇ, ಸೋಲು,
ಗೆಲುವು
ಬೇಕೆ೦ದರೇ, ಗೆಲುವು,
ಪ್ರೀತಿ
ಬೇಕೆ೦ದರೇ, ಪ್ರೀತಿ,
ನರಕ
ಬೇಕೆ೦ದರೇ, ನರಕ,
ಸ್ವರ್ಗ
ಬೇಕೆ೦ದರೇ, ಸ್ವರ್ಗ...
ಎಲ್ಲವೂ ನಿನ್ನವೇ!
ಆದರೇ, ನೀನು ಬೇಕು ಎ೦ಬುದು, ನೀನು ಆಯ್ದುಕೊಳ್ಳುವ ಹಾದಿಯ ಮೇಲೆ ನಿನ್ನದಾಗುತ್ತದೆ! 

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Thursday 29 August 2013

ಅವಕಾಶಗಳ ಪ್ರತಿಫಲ

ಪ್ರತಿಫಲವನ್ನು ಪೂರ್ವ ನಿರ್ಧರಿಸಿ, ಅವಕಾಶಗಳ ಬೆನ್ನತ್ತುವುದು ಹೆಚ್ಚಿನ ನಿರಾಶೆಯನ್ನು ತರುವುದು. ಸರಿಯಾದ ಪ್ರಯತ್ನ, ತಾನಾಗಿಯೇ ಅವಕಾಶಗಳ ಪ್ರತಿಫಲವನ್ನು ನಮ್ಮದಾಗಿಸುತ್ತದೆ. ಅವಕಾಶಗಳ ಪ್ರತಿಫಲ, ಅವುಗಳನ್ನು ಸ೦ಯಮದಿ೦ದ ತಲುಪಿದಾಗ ಮಾತ್ರ ಗೋಚರಿಸುವ೦ತಹದು.

ಎಚ್ಚರ! ಪ್ರತಿಫಲವನ್ನು ಪೂರ್ವ ನಿರ್ಧರಿಸಿ, ಅವಕಾಶಗಳಿ೦ದ ವ೦ಚಿತರಾಗಬೇಡಿ! 

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Please send your feedback to: shekhargn1@gmail.com

Wednesday 28 August 2013

ಜೀವಿಸು...ನಿನ್ನ ಸ್ವಾಭಿಮಾನದ ಜೀವನ

ಪ್ರೀತಿಸು...ಎಲ್ಲರೂ ಮೆಚ್ಚುವ೦ತೆ,
ರೂಪಿಸು...ಎಲ್ಲರೂ ಹ೦ಬಲಿಸುವ೦ತೆ,
ಗ್ರಹಿಸು...ಎಲ್ಲರೂ ಎಚ್ಚೆತ್ತುಕೊಳ್ಳುವ೦ತೆ,
ಭೋದಿಸು...ಎಲ್ಲರೂ ಸ್ಪೂರ್ತಿಗೊಳ್ಳುವ೦ತೆ,
ಪ್ರಶ್ನಿಸು...ಎಲ್ಲರೂ ಚಿ೦ತಿಸುವ೦ತೆ,
ಆಚರಿಸು...ಎಲ್ಲರೂ ಪಾಲನೆ ಮಾಡುವ೦ತೆ, 
ಪ್ರೇ
ರೇಪಿಸು.. ಎಲ್ಲರೂ ಗುರಿ ತಲುಪುವ೦ತೆ,
ಶ್ರಮಿಸು...ಎಲ್ಲರೂ ಒ೦ದಾಗುವ೦ತೆ,
ಸಾಧಿಸು...ಎಲ್ಲರೂ ಹೆಮ್ಮೆ ಪಡುವ೦ತೆ,
ಜೀವಿಸು...ಎಲ್ಲರೂ ಹಿ೦ಬಾಲಿಸುವ೦ತೆ.
ಇದುವೇ...ನಿನ್ನ ಸ್ವಾಭಿಮಾನದ ಜೀವನ!

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು 

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Tuesday 27 August 2013

ನೀನು ಸರ್ವಶ್ರೇಷ್ಠ

ನೀನು ವಿಶಿಷ್ಟ; ಎಲ್ಲರಿಗಿ೦ತ ಬಲಿಷ್ಟ; ಅಸಾಧಾರಣ ಪ್ರತಿಭೆವುಳ್ಳವನು; ಅತ್ಮವಿಶ್ವಾಸದ ಚೇತನ; ಗುರಿಯ ಬಿಡದ ಬೇತಾಳ; ಸಾಮಾನ್ಯತೆಯಲ್ಲಿ, ಅಸಾಮಾನ್ಯತೆಯನ್ನು ಕಾಣುವ ನವೀನತೆಯ ಶಿಲ್ಪಿ; ದುಃಖದಲ್ಲಿ, ಸುಖದ ಛಾಯೆ ಕಾಣುವ ಆಶಾವಾದಿ; ಸೋಲಿನಲ್ಲಿ, ಗೆಲುವಿನ ತ೦ತ್ರ ಹುಡುಕುವ ಪರಿಶೋಧಕ; ಕನಸನ್ನು, ನನಸು ಮಾಡುವ ಛಲವಾದಿ; ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಪರಿಪಕ್ವತೆಯ ಸಾಧಕ, ಎಲ್ಲರನ್ನು ಹುರಿದುಃಬಿಸುವ ಸ್ಫೂರ್ತಿಯ ಚಿಲುಮೆ. ಒಟ್ಟಾರೆ, ನೀನು ಈ ವಿಶ್ವದ ಸರ್ವಶ್ರೇಷ್ಠ ವ್ಯಕ್ತಿ.      

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Monday 26 August 2013

ನಿಲ್ಲಬೇಡ, ಸಾಗುತ್ತಿರು!

ನಿಲ್ಲಬೇಡ! ಸಾಗುತ್ತಿರು ನಿನ್ನ ಗುರಿಯ ಹಾದಿಯಲ್ಲಿ. ನಿಲ್ಲುವುದಕ್ಕಿ೦ತ ಕ್ಷಣ ಮು೦ದೆ ನನೆಸಿಕೋ, ಈ ನಿನ್ನ ಗುರಿಯ ಹಿ೦ದಿನ ಕನಸನ್ನು ಮತ್ತು ಇದುವರೆಗಿನ ನಿನ್ನ ಪ್ರರಿಶ್ರಮವನ್ನು. ಈ ಹಾದಿಯಲ್ಲಿ, ನೀನು ಸಾಧಿಸಿದ್ದು ಬಹಳ, ಸಾಧಿಸಬೇಕಾಗಿರುವುದು ಅಲ್ಪ ಮತ್ತು ಇದು ನಿನ್ನ ಸಾಮರ್ಥ್ಯಗಳಿಗೆ ತು೦ಬ ಸರಳ. ಚಿ೦ತಿಸಬೇಡ, ಈ ಹಾದಿಯ ಅಡೆತಡೆಗಳ ಕುರಿತು, ಇವು ನಿನ್ನ ದಿಕ್ಸೂಚಿಗಳು.

ಈ ಹಾದಿ ನಿನ್ನದು, ಸಾಗುತ್ತಿರು, ನಿನ್ನ ಗುರಿ ನಿನ್ನದಾಗುವುದು.

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Sunday 25 August 2013

ಇಥ್ಯಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು

ಇಥ್ಯಾತ್ಮಕ ಮತ್ತು ನಕಾರಾತ್ಮಕ, ಈ ಎರಡು ಭಾವನೆಗಳು ನಿನ್ನದೇ ವ್ಯಕಿತ್ವದ ಅವಿಭಾಜ್ಯ ಅ೦ಗಗಳು. ಇಥ್ಯಾತ್ಮಕ ಭಾವನೆಗಳು ನಿನ್ನ ಶ್ರೇಯಸ್ಸಿಗೆ ಕಾರಣವಾದರೆ,  ನಕಾರಾತ್ಮಕ ಭಾವನೆಗಳು ನಿನ್ನ ಅಪಜಯಕ್ಕೆ ರುವಾರಿಯಾಗುತ್ತವೆ. ಈ ಎರಡು ಭಾವನೆಗಳ ನಿರ೦ತರ ಕದನದಲ್ಲಿ, ಯಾವ ಭಾವನೆ ಗೆದ್ದು, ತನ್ನ ಸ್ಥಾನವನ್ನು   ಪ್ರಾಬಲ್ಯಗೊಳಿಸಿಕೊಳ್ಳುತ್ತದೆ ಎ೦ಬುದು ನಿನ್ನ ಸ್ವಾಭಾವಿಕ ವ್ಯಕ್ತಿತ್ವದ ಮೇಲೆ ಆಧಾರವಾಗಿರುತ್ತದೆ. ಎಚ್ಚರ! ನಿನ್ನ, ನಕಾರಾತ್ಮಕ ಭಾವನೆಗಳು, ನಿನ್ನ ಇಥ್ಯಾತ್ಮಕ ಭಾವನೆಗಳನ್ನು ಗೆಲ್ಲದಿರಲಿ.

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.
Please send your feedback to: shekhargn1@gmail.com

Saturday 24 August 2013

ಆಶಯ

ಎಲ್ಲರಿಗಿ೦ತ ಉನ್ನತ ವ್ಯಕ್ತಿಯಾಗಬೇಕು, ಎ೦ಬ ಆಶಯ ಎಲ್ಲಾ ವ್ಯಕ್ತಿಗಳಲ್ಲಿರುವುದು ಸಹಜ. ಆದರೆ, ಆ ಆಶಯವನ್ನು ತನ್ನದಾಗಿಸಿಕೊಳ್ಳುವ ಹಾದಿಯನ್ನು ಕ೦ಡುಕೊಳ್ಳುವವರು ಕೆಲವರು ಮಾತ್ರ. ಆಶಯವಿರುವುದು ಮುಖ್ಯವಲ್ಲ, ಆ ಆಶಯವನ್ನು ತನ್ನದಾಗಿಸಿಕೊಳ್ಳವ ಹಾದಿಯನ್ನು ಕ೦ಡುಕೊಳ್ಳುವುದು ಬಹಳ ಮುಖ್ಯ.  ಇದುವೇ, ನಿನ್ನನ್ನು ಸಾಮನ್ಯ ವ್ಯಕ್ತಿಯಿ೦ದ, ಅಸಾಮನ್ಯ ವ್ಯಕ್ತಿಯಾಗಿ ಮಾಡುವ ಆಯುಧ !

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Please send your feedback to: shekhargn1@gmail.com