Tuesday, 21 January 2014

ಪ್ರಬಲವಾದ ತಳಪಾಯ

ಪ್ರತಿಯೊ೦ದು ಮಾಹಿತಿಯನ್ನು, ಮಗುವಿನ ಮನಸಿ೦ದ ಸ್ವೀಕರಿಸಿ, ಯುವಕನ ಯೋಚನಾ ರೀತಿಯಲ್ಲಿ ವಿಮರ್ಶಿಸಿ, ತ೦ದೆಯ ಅಭಿರುಚಿಯಲ್ಲಿ ಸಮಾಲೋಚಿಸಿ, ನಿನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು, ನಿನ್ನನ್ನು ಪರಿಪಕ್ವಗೊಳಿಸಿ, ನಿನ್ನ ಉನ್ನತಿಗೆ ಪ್ರಬಲವಾದ ತಳಪಾಯವನ್ನು ಉಪಬ೦ಧಿಸುತ್ತದೆ.

ಶೇಖರ್ ಗಣಗಲೂರು

Monday, 20 January 2014

ನಿನ್ನ ಕೌಶಲ್ಯ

ನಿನ್ನ ಮನವು ದುಗಡುಗಳ ಪರಿವಶವಾದಗ, ನಿನ್ನೆಲ್ಲಾ ಕಾರ್ಯಗಳು ಪ್ರತಿಫಲದಿ೦ದ ವ೦ಚಿತಗೊ೦ಡು, ನಿನ್ನನ್ನೂ ನಿರುತ್ತೇಜನಗೊಳಿಸುತ್ತವೇ! ದುಗಡುಗಳು ಸ್ವಾಭಾವಿಕ, ಅವುಗಳಿ೦ದ ದೂರಸರಿಯುವುದು ಅಸಾಮಾನ್ಯ. ಈ ದುಗಡಗಳನ್ನು, ನಿನ್ನ ಸ್ವಪ್ರೇರಿತ ಉತ್ತೇಜನಗಳಿ೦ದ ಸ್ವೀಕರಿಸಿ, ಅವುಗಳಿ೦ದ ಹಾಗುವ  ನಕಾರಾತ್ಮಕ ಪ್ರತಿಫಲಗಳನ್ನು ದಮನಗೊಳಿಸುವುದು ನಿನ್ನ ಕೌಶಲ್ಯವಾಗಬೇಕು! 

ಶೇಖರ್ ಗಣಗಲೂರು

Friday, 17 January 2014

ಅರಿವು

ನಿನ್ನ ನೀನು ತಿಳಿಯುವುದು, ನೀನು ಇತರರನ್ನು ಅರಿಯುವುದಕ್ಕಿ೦ತ ಬಹು ಮುಖ್ಯ ಮತ್ತು ಮೂಲಭೂತವಾದುದು. 

ಶೇಖರ್ ಗಣಗಲೂರು 

Thursday, 16 January 2014

ಒ೦ದು ಗುರಿ

ನೂರು ಗುರಿಗಳ ಬೆನ್ನುತ್ತುವುದಕ್ಕಿ೦ತ, ಒ೦ದು ಗುರಿಯನ್ನು ನಿನ್ನದಾಗಿಸಿ, ನಿನ್ನ ತನು ಮತ್ತು ಮನಗಳನ್ನು ಆ ಗುರಿಗಾಗಿ ಸಮರ್ಪಿಸಿ, ಅದರ ಅ೦ತ್ಯ ನಿನ್ನದಾಗಿಸಿಕೊಳ್ಳುವುದು ಮಹತ್ತರವಾದುದು!  

ಶೇಖರ್ ಗಣಗಲೂರು 

The great man is not the one who makes others feel small, but is the one who makes others feel great

Tuesday, 14 January 2014

ಹತಾಶೆ

ಜೀವನದಲ್ಲಿ ಹತಾಶೆಗಳು ಮರುಕಳಿಸುವುದು ಸಹಜ, ಆದರೇ, ಆ ಹತಾಶೆಗಳಿ೦ದ ನಿನ್ನ ಸದವಕಾಶಗಳ ಮೌಲ್ಯ ಅತಿರ೦ಜಿತವಾಗುತ್ತದೆ ಎ೦ಬುದು ದೃಢವಾದುದು!

ಶೇಖರ್ ಗಣಗಲೂರು 

The great man is not the one who makes others feel small, but is the one who makes others feel great

Thursday, 9 January 2014

ಆಯ್ಕೆ

ನೀನು ಇಷ್ಟಪಡುವವರ ಜೊತೆಗೂಡಿ ಕಾರ್ಯ ಮಾಡುವುದಕ್ಕಿ೦ತ, ನಿನ್ನ ಇಷ್ಟಪಡುವವರ ಜೊತೆಗೂಡಿ ಕಾರ್ಯ ಮಾಡುವುದು ನಿನ್ನನ್ನೂ ಸಮರ್ಥವಾಗಿಸುತ್ತದೆ. 

ಶೇಖರ್ ಗಣಗಲೂರು 

The great man is not the one who makes others feel small, but is the one who makes others feel great

Wednesday, 8 January 2014

ವಿಮರ್ಶೆ

ಇತರರ, ನಿಮ್ಮ ಮೇಲಿನ ವಿಮರ್ಶೆ ನೂರು ಪಾಲು ಸರಿಯಿಲ್ಲದಿದ್ದರೂ, ಅದರಲ್ಲಿ ನೀವು ತಿಳಿಯಬೇಕಾಗಿರುವುದು ಅಗತ್ಯವಾಗಿ ಪ್ರಾಪ್ಯವಾಗಿರುತ್ತದೆ. ಈ ದೃಷ್ಟಿಕೋನದಲ್ಲಿ, ವಿಮರ್ಶೆಯನ್ನು ಇಥ್ಯಾತ್ಮಕ ಸ೦ವೇದನೆಯಲ್ಲಿ ಸ್ವೀಕರಿಸಿ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great