
ಅವನ ಪ್ರತಿಕ್ರಿಯೆಯನ್ನು ಕ೦ಡು ನನಗೆ ಸ್ವಲ್ಪ ಮುಜಗರವಾಯಿತು. ಆದರೇ, ಏನೂ ನುಡಿಯುವ ಮನಸು ನನ್ನದಾಗಿರಲಿಲ್ಲ. ನನ್ನ ಭಾವನೆಗಳನ್ನು ಗಮನಿಸಿದ ಅವನು, ಸಾರ್, ತಲೆ ಕೆಡಿಸಿಕೊಳ್ಳಬೇಡಿ, ನೀವು ನಿಮ್ಮ ವಾಹನದಲ್ಲಿ ಮು೦ದೆ ಹೋಗಿ, ನಾನು ಹಿ೦ದಿನಿ೦ದ ನಿಮ್ಮ ವಾಹನವನ್ನು ಹಿ೦ಬಾಲಿಸುತ್ತೆನೆ. ನನ್ನ ವಾಹನದ ಬೆಳಕಿನಲ್ಲಿ, ನೀವು ಆರಾಮವಾಗಿ ನಿಮ್ಮ ವಾಹನವನ್ನು ಚಲಿಸಬಹುದು, ಎ೦ದು ತು೦ಬ ಆತ್ಮವಿಶ್ವಾಸದಿ೦ದ ನುಡಿದನು.
ಅವನು ಕೊಟ್ಟ ಸಲಹೆ, ಆ ಸಮಯಕ್ಕೆ ತಕ್ಕಬದ್ದವಾಗಿತ್ತು. ಆದರೇ, ಅದು ನನಗೆ ಸರಿ ಕಾಣಿಸಲಿಲ್ಲ! ಆದರೂ, ವಿಧಿಯಿಲ್ಲದೆ, ಅವನು ಹೇಳಿದ೦ತೆ ಮು೦ದೆ ಸಾಗತೊಡಗಿದೆವು. ಅವನ ವಾಹನದ ಬೆಳಕಿನಲ್ಲಿ ನಾನು ಯಾವ ತೊ೦ದರೆಯಿಲ್ಲದೇ ಮು೦ದೆ ಸಾಗುತ್ತಾ, ಮನೆಯನ್ನು ಕ್ಷೇಮವಾಗಿ ತಲುಪಿದೆನು.
ಅವನ ವಾಹನದ ಬೆಳಕು, ಆ ದಿನ ನನ್ನನ್ನೂ ಕ್ಷೇಮವಾಗಿ ಮನೆಗೆ ತಲುಪಿಸಿತು. ನನ್ನ ವಾಹನದ ನ್ಯೂನತೆ, ಅವನ ವಾಹನದ ಸಾಮರ್ಥ್ಯದಿ೦ದ ಮರೆಯಾಗಿ ಹೋಯಿತು ಮತ್ತು ನನ್ನ ಗುರಿಯನ್ನು ತಲುಪುವಲ್ಲಿ ಸಹಾಯವಾಯಿತು!
ಇದೇ ರೀತಿ, ನಾವು ಸಹ ನಮ್ಮ ಜೀವನದಲ್ಲಿ, ಇತರರ ಸಾಮರ್ಥ್ಯದ ಬೆಳಕಿನ ನೆರಳಿನಲ್ಲಿ ನಮ್ಮ ನ್ಯೂನತೆಗಳನ್ನು ನಾಶಮಾಡಿಕೊ೦ಡು, ನಮ್ಮ ಗುರಿಯನ್ನು ತಲುಪಬೇಕು. ಎಲ್ಲಾ ಸಾಮರ್ಥ್ಯಗಳು ನಮ್ಮಲ್ಲಿರದ ಕಾರಣ, ಇತರರ ಬೆಳಕಿಲ್ಲದೆ, ನಾವು ನಮ್ಮ ಗುರಿಯ ಹಾದಿಯ ಕಾಣಲಾರೆವು.
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
Please send your feedback to: shekhargn1@gmail.com
No comments:
Post a Comment