ಮು೦ಜಾನೆಯ ಸೂರ್ಯ ಕಣ್ಣು ತೆರೆಯುತ್ತಿದ್ದ೦ತೆ, ದಿನದ ಕೆಲಸಗಳ ನೆನೆದು, ಅವಸರದಲ್ಲಿ ಸಜ್ಜಾಗಿ ಕಛೇರಿಯ ದಾರಿ ಹಿಡಿದೆನು.
ಸ್ವಲ್ಪ ದೂರ ಚಲಿಸುತ್ತಿದ್ದ೦ತೆ, "ಟೀಕೆ", ಎ೦ಬ ವ್ಯಕ್ತಿಯು ನನ್ನ ವಾಹನವನ್ನು ಪ್ರವೇಶಿಸಿದನು. ನೀನು ಸೋಲಿನ ಸರದಾರ, ನಿರುಪಯೋಗಿ, ಅಸಹಾಯಕ ಮತ್ತು ಈ ದಿನ, ನಿನ್ನ ಅನುಪಯುಕ್ತ ದಿನ ಎನ್ನುತ್ತಿದ್ದ೦ತೆ, "ದ್ವೇಷ", ಎ೦ಬ ವ್ಯಕ್ತಿಯು ಜೊತೆಗೂಡಿದನು. ಯಾರನ್ನೂ ನ೦ಬಬೇಡ, ಎಲ್ಲರೂ ಸ್ವಾರ್ಥಿಗಳು ಮತ್ತು ನಿನ್ನ ಸೋಲಿನ ರುವಾರಿಗಳು, ಎ೦ದು ನನ್ನ ಗಮನವನ್ನು ತನ್ನತ್ತ ಸಳೆಯುತ್ತಿದ್ದ೦ತೆ, "ಸ್ವಾರ್ಥ" ಎ೦ಬ ವ್ಯಕ್ತಿಯು ವಾಹನವನ್ನು ಪ್ರವೇಶಿಸಿದನು. ನೀನು, ಬೇರೆಯವರ ಬಗ್ಗೆ ಚಿ೦ತಿಸಬೇಡ. ನಿನ್ನ ಜೀವನ, ಪರಿವಾರ ಮತ್ತು ಆಸೆಗಳು ಬಹಳ ಮುಖ್ಯ ಎನ್ನುತ್ತಿದ್ದ೦ತೆ, ಮೂವರು ಇಳಿಯುವ ಸ್ಥಳ ತಲುಪಿದೆವು. ಆ ಮೂವರಿಗೂ, ಬೀಳ್ಕೂಟ್ಟು, ದುಗಡದ ಮನದಲ್ಲಿ ಕಛೇರಿಯ ಕಡೇ ಮುಖಮಾಡಿದೆನು.
ಸ್ವಲ್ಪ ದೂರ ಚಲಿಸುತ್ತಿದ್ದ೦ತೆ, "ಉತ್ತೇಜನ" ಎ೦ಬ ವ್ಯಕ್ತಿಯು ವಾಹನವನ್ನು ಪ್ರವೇಶಿಸಿದನು. ನೀನು, ತು೦ಬಾ ಧೃಡ ವ್ಯಕ್ತಿ, ಆಶಾವಾದಿ, ಈ ಪ್ರಪ೦ಚದ ಅತ್ಯ೦ತ ಸುಖಕರವಾದ ಜೀವನ ನಿನ್ನದು ಎನ್ನುತ್ತಿದ್ದ೦ತೆ, "ಪ್ರೀತಿ" ಎ೦ಬ ವ್ಯಕ್ತಿಯು ಜೊತೆಗೂಡಿದನು. ನೀನು, ಪ್ರೀತಿಸುವ ವ್ಯಕ್ತಿ, ಇತರರನ್ನು ನ೦ಬುವ ಮತ್ತು ಎಲ್ಲರನ್ನು ಸಮಾನವಾಗಿ ನೋಡುವ ಪ್ರೇಮಾಧಿಪತಿ ಎ೦ದು ನನ್ನನ್ನು ಪ್ರೇರೆಪಿಸುತ್ತಿದ್ದ೦ತೆ, "ನಿಸ್ವಾರ್ಥಿ" ಎ೦ಬ ವ್ಯಕ್ತಿಯು ವಾಹನವನ್ನು ಪ್ರವೇಶಿಸಿದನು. ನೀನು, ಪರರಿಗೆ ಅನ್ಯಾಯವನ್ನು ಮಾಡದವನು, ಇತರರ ಖುಷಿಯಲ್ಲಿ ಸುಖ ಕಾಣುವವನು, ಇರುವುದರಲ್ಲಿ ಹ೦ಚಿ ಬಾಳುವವನು, ಭೂತಾಯಿಯ ಗುಣದವನು ಎನ್ನುತ್ತಿದ್ದ೦ತೆ, ಅವರ ಸ್ಥಳವನ್ನು ತಲುಪಿದೆವು. ಅವರಿಗೆ ವಿದಾಯ ಕೊಟ್ಟು, ಕಛೇರಿಯ ಕಡೇ ಮುಖ ಮಾಡುತ್ತಿದ್ದ೦ತೆ, ನನ್ನ ಜೊತೆ ಪಯಣಿಸಿದ ಆ ಆರು ವ್ಯಕ್ತಿಗಳು ಕಣ್ಮು೦ದೆ ಅವರಾಡಿದ ಮಾತುಗಳನ್ನು ಪುನರ್ ಉಚ್ಚರಿಸುತ್ತಾ, ಅವರ ಪ್ರಭಾವ ಬೀರಲು ಸರ್ವ ಪ್ರಯತ್ನವನ್ನು ಮಾಡುತ್ತಿದ್ದರು.
ಈ ರೀತಿ, ತು೦ಬಾ ವ್ಯಕ್ತಿಗಳು, ನಮ್ಮ ಜೀವನದಲ್ಲಿ ಪ್ರವೇಶಿಸಿ ತಮ್ಮದೇ ಆದ ಪ್ರಭಾವ ನಮ್ಮ ಮೇಲೆ ಬೀರಲು ಪ್ರಯತ್ನಿಸುತ್ತಾರೆ. ಆದರೇ, ಯಾರ ಪ್ರಭಾವ ನಮ್ಮದಾಗ ಬೇಕು ಎ೦ಬುದು, ನಮ್ಮ ಮೇಲೆ ನಿರ್ಧಾರವಾಗಿರುತ್ತದೆ ಮತ್ತು ನಮ್ಮ ಜೀವನವನ್ನು ರೂಪಿಸುತ್ತದೆ. ನಮ್ಮ ಜೀವನ, ನಮ್ಮ ನಿರ್ಧಾರ!
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು

Please send your feedback to: shekhargn1@gmail.com
No comments:
Post a Comment